Archive for the ‘Uncategorized’ Category

ಹೊಸದಿಗಂತ ಕಿರುತೆರೆ ಕಾಲಂ: ಭಾಗ 2: ಟಿ ಆರ್ ಪಿ ಗುಟ್ಟು-ರಟ್ಟು
November 27, 2011

ಇಂದು ಚಾನಲ್ ಗಳಿಗೆ ಬೇಕಾಗಿರುವುದು ಟಿ ಆರ್ ಪಿ. ಅಂದರೆ ಒಂದು ಕಾರ್ಯಕ್ರಮವನ್ನು ಎಷ್ಟು ಮಂದಿ ನೋಡುತ್ತಿದ್ದಾರೆ ಎನ್ನುವ ಕುರಿತ ಮಾಹಿತಿ. ಇದರ ಮಾಹಿತಿಯನ್ನಾಧರಿಸಿ ವಿವಿಧ ಜಾಹೀರಾತುದಾರರ ದಂಡು ಕಾರ್ಯಕ್ರಮ ಅಥವಾ ಚಾನಲ್ ಗೆ ಬರುತ್ತದೆ. ಹಾಗಿದ್ದರೆ ಈ ಟಿಆರ್ಪಿಯ ಗುಟ್ಟೇನು? ಅದು ಹೇಗೆ ಟಿ ಆರ್ಪಿ ತಿಳಿಯಬಹುದು? ಈ ಪ್ರಶ್ನೆ ಅಂತೂ ಪ್ರತಿಯೊಬ್ಬರ ಮನಸ್ಸನ್ನೂ ಒಮ್ಮೆಯಾದರೂ ಕಾಡಿರದೇ ಇರದು. ಯಾಕಂದರೆ ಟಿವಿ ವಾಹಿನಿಯಲ್ಲಿ ಕೆಲಸ ಮಾಡುವ ಕೆಲ ಮಂದಿಗೂ ಇದರ ಮರ್ಮದ ಅರಿವಿರುವುದಿಲ್ಲ. ನನ್ನನ್ನೂ ಬಹಳ [...]

ಹೊಸದಿಗಂತದಲ್ಲಿ ನನ್ನ ಕಿರುತೆರೆ ಕಾಲಂ
November 23, 2011

ನವೆಂಬರ್ 18, 2011 ಹೊಸದಿಗಂತ ‘ಸಿನಿದಿಗಂತ’ ಈ ಕಾಲಂನ ಹೆಸರು ಬದಲಾಗಲಿದೆ. ಆದರೆ ಈ ವಾರದಿಂದ ಪ್ರತಿ ವಾರ ಕಿರುತೆರೆಯ ಕಾರ್ಯಕ್ರಮಗಳ ಕುರಿತು ಅಂಕಣ ಬರೆಯಲಿದ್ದೇನೆ. ದಯವಿಟ್ಟು ಓದಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.

ಮೀ ಮೀಡಿಯಾ… ಪತ್ರಿಕೆಗಳ ಪುಟಗಳಿಂದ…
November 18, 2011

ಬಹಳ ದಿನಗಳ ನಂತರ ಇಲ್ಲಿ ಭೇಟಿಯಾಗುತ್ತಿದೆ. ಮೊದಲ ಚಿತ್ರ ಡಿಎನ್ಎ ಪತ್ರಿಕೆಯಲ್ಲಿ 17 ನವೆಂಬರ್ 2011ರಂದು ಪ್ರಕಟವಾದ ಚಿತ್ರ, ಎರಡನೆಯದು 24 10 2011ರಂದು ದೀಪಾವಳಿ ಕುರಿತು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ ನನ್ನ ಸಂದರ್ಶನ. ಈ ವಾರದ ನಂತರ ಪ್ರತಿ ಶುಕ್ರವಾರ ನನ್ನ ಕಿರುತೆರೆ ಕುರಿತ ಕಾಲಂ ಹೊಸ ದಿಗಂತದಲ್ಲಿ ಪ್ರಕಟವಾಗಲಿದೆ.

ಸ್ಟೀವ್ ಜಾಬ್ಸ್ ಎಂಬ ಐ ಮಹಾತ್ಮ
October 15, 2011

   

ತಂಗಿ
August 18, 2011

ನಿನ್ನೆ ಪೂರ್ತಿ ನಿನ್ನ ಕಾಡಿದೆ ನಿನ್ನೆಯವರೆಗೆ ನಿನ್ನ ಕಾಡಿದ ಹಾಗೆ   ನಿನ್ನೆ ರಾತ್ರಿ ನಿನ್ನನ್ನೇ ನೆನೆದೆ ನಿನ್ನೆಯವರೆಗೆ ನಿನ್ನ ನೆನೆದ ಹಾಗೆ   ಪ್ರಾಯ ಚಿಕ್ಕದು ಪ್ರೀತಿ ದೊಡ್ಡದು ನೀನು ನೀಡಿದ ಮಮತೆ ಮರೆಯದು   ತಂಗೀ ಅಂದರೆ ನೀನು ಒಬ್ಬಳೆ ನನ್ನ ಪೂರ್ತಿ ಜನುಮಕೊಬ್ಬಳೆ   ಹುಸಿ ಮುನಿಸಲಿ ಮೂಗು ಮುರಿಯುವೆ ಮರುಕ್ಷಣದಲೇ ಬಂದು ತಬ್ಬುವೆ   ನನಗೆ ಗೊತ್ತಿದೆ ನೀನು ಹೀಗೆಯೇ ದೂರ ಹೋದರೂ ನನ್ನ ತಂಗಿಯೇ   ಮರೆವೆನೆಂದರೆ ಮರೆವೆ ಹೇಗೆ [...]

ಇರುಳುರುಳು
June 24, 2011

ಇರುಳು ಹಗಲಾದರೆ ಹಗಲು ಇರುಳಾಗಬೇಕು   ಇರುಳು ಹಗಲುಗಳು ಅದಲು ಬದಲಾದರೆ ಮನುಜ ಮರುಳಾಗಬೇಕು   ಇರುಳ ನಿದಿರೆಗೆ ಉರುಳು ಹಗಲ ಬದುಕಿಗೆ ನರಳು   ಹಗಲಿರುಳು ದುಡಿವವರು ಇರುಳೇ ಹಗಲೆನ್ನುವವರು ಇರುಳಿಗೇ ಹೆಗಲಾದವರು  

ಹೊಳೆ
June 16, 2011

ಹೊಳೆ ಹೊಳೆಯುವುದಿಲ್ಲ ಹೊಳೆಯುವುದು ಹೊಳೆಯಲ್ಲ   ಹೊಳೆಯುತ್ತ ಬಂದು ಹೋಗುವುದು ಒಂದು ಹೊಳೆಯಂತೆ ಎಂದಿಗೂ ಹರಿಯುತ್ತಿರುವುದು   ಒಂದು ಕ್ಷಣಮಾತ್ರ ಇನ್ನೊಂದು ನಿರಂತರ   ನಾವೂ ಇರಬೇಕು ಹೊಳೆಯ ಹಾಗೆ ಆದರೆ, ಯಾವ ಹೊಳೆ?

ಐದು ವರ್ಷ-ಕ್ಷಣ ಕ್ಷಣವೂ ಹರ್ಷ
May 3, 2011

ನಾನು ಬೆಂಗಳೂರಿಗೆ ಬಂದು 5 ವರ್ಷವಾಗಿದೆ. ಅಂದ ಹಾಗೆ, ಬೆಂಗಳೂರಿಗೆ ಬರುವುದಕ್ಕೂ ನನ್ನ ವೃತ್ತಿಪರ ಬದುಕಿಗೂ ನೇರ ಸಂಬಂಧವಿದೆ. ಟಿವಿ9ನಲ್ಲಿ ವರದಿಗಾರನಾಗಿ ಸೇರುವುದಕ್ಕೇ ಬೆಂಗಳೂರಿಗೆ ಬಂದಿದ್ದೆ. ಮೇ 2, 2006. ನಿನ್ನೆಗೆ ಸರಿಯಾಗಿ ಐದು ವರ್ಷ ತುಂಬಿ ಇದೀಗ ನನ್ನ ವೃತ್ತಿ ಬದುಕಿನ ಪ್ರಥಮ ದಶಕದ ದ್ವಿತೀಯಾರ್ಧಕ್ಕೆ ಕಾಲಿಡುತ್ತಿದ್ದೇನೆ. ಒಬ್ಬ ವರದಿಗಾರನಾಗಿ ಶುರುಮಾಡಿದ ನನ್ನ ವೃತ್ತಿ ಬದುಕು ನಂತರ ವಾರ್ತಾವಾಚನ, ಹಿನ್ನೆಲೆ ಧ್ವನಿ, ಒಂದೊಮ್ಮೆ ಛಾಯಾಗ್ರಹಣ, ಮುಂದೆ ವರ್ಲ್ಡ್ ಸ್ಪೇಸ್ ನಲ್ಲಿ ಆರ್ ಜೆಯಾಗಿ, ಬಿಗ್ ಎಫ್ [...]

ನಾಳೆ
April 10, 2011

ನಾಳೆ ಅನ್ನೋದು ಇಂದಿಗಿಂತ ಚೆನ್ನ ನಿನ್ನೆಗಿಂತ ಭಿನ್ನ ಮೊನ್ನೆಗಿಂತಲೂ ವಿಭಿನ್ನ   ನಾಳೆ ಅನ್ನೋದು ಸಿಕ್ಕಿದ್ದಕ್ಕಿಂತ ಹೆಚ್ಚು ಕೇಳಿದ್ದಕ್ಕಿಂತ ಜಾಸ್ತಿ ಪ್ರಾಪ್ತಿಗಿಂತ ಮಿಗಿಲು   ನಾಳೆ ಅನ್ನೋದು ಮಾತಿಗೆ ಸಿಗದು ನಗದಿಗೆ ನಗದು ಅಳುವಿಗೆ ಅಳುಕದು   ನಾಳೆ ಅನ್ನೋದು ಹಾಗೆ ಸ್ವಲ್ಪ ಖಾರ ಜಾಸ್ತಿ ಉಪ್ಪು ಹೆಚ್ಚು ಸಿಹಿಗೂ ಮಿಗಿಲಾದ್ದು   ನಾಳೆ ಅನ್ನೋದು ಇದುವರೆಗೂ ಊಹಿಸಿರದ ಊಹಿಸಿದರೆ ಸತ್ಯವಾಗದ ಸತ್ಯಗಳಿಗೇ ಸವಾಲು   ನಾಳೆ ಅನ್ನೋದು ಸ್ವಲ್ಪ ಹಾಗೆನೆ ನಮಗ್ಗೊತ್ತಿಲ್ಲ ಗೊತ್ತಿದ್ದಂತಿರಲ್ಲ   ನಾಳೆ [...]

ಯುಗಾದಿ ಹಬ್ಬದ ಶುಭಾಶಯಗಳು
April 4, 2011

ನಿಮಗೆಲ್ಲಾ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು! ನನ್ನ ಈ ಹೊಸವರ್ಷವನ್ನು ಈ ಬಾರಿ ಸ್ವಾಗತಿಸಿದ್ದು ಹಂಪಿಯಿಂದ. ಕಳೆದ ಕೆಲ ವರ್ಷಗಳಿಂದ ಹಂಪಿಗೆ ಬರಬೇಕು ಎನ್ನುವ ಹಂಬಲ ತುಂಬಿದ್ದ ನಾನು ಆ ಕನಸನ್ನು ನನಸಾಗಿಸುತ್ತಾ ಖರ ನಾಮ ಸಂವತ್ಸರಕ್ಕೆ ಕಾಲಿಟ್ಟದ್ದು ಖುಷಿ ತಂತು. ಇನ್ನಷ್ಟು ಖುಷಿಯ ಕ್ಷಣಗಳ ಚಿತ್ರ-ವಾರ್ತೆ ಮತ್ತು ಉಳಿದವುಗಳು, ಮುಂದಿನ ಪೋಸ್ಟ್ ನಲ್ಲಿ.

Follow

Get every new post delivered to your Inbox.