ನಾನು… ನನ್ನ ಕಥೆ…

ಈ ಸ್ಥಳ ನನ್ನ ಕಥೆ ಬರೆಯೋದಕ್ಕೆ ಸರಿಯಾದ ಜಾಗ ಅಲ್ಲದೇ ಇದ್ರೂ ನನ್ನ ಬಗ್ಗೆ ಒಂದೆರಡು ಮಾತುಗಳನ್ನು ಬರೆಯೋದಕ್ಕೆ ಸರಿಯಾದ ಸ್ಥಳ ಅನ್ನೋದು ನನ್ನ ಅಭಿಪ್ರಾಯ.

ಕಳೆದ ಸುಮಾರು ಐದು ವರ್ಷಗಳ ಕಾಲ ಪೂರ್ಣ ಪ್ರಮಾಣದಲ್ಲಿ ಪತ್ರಿಕೋದ್ಯಮದಲ್ಲಿದ್ದು, ಅದಕ್ಕಿಂತ ಮೊದಲು, ಕಲಿಯುವ ವೇಳೆಯಲ್ಲಿ ವಿವಿಧ ಪತ್ರಿಕೆಗಳಿಗೆ ವೈವಿಧ್ಯಮಯ ಲೇಖನಗಳನ್ನು ಬರೆದು ಬರೆದು ಇದೀಗ ನಿಮ್ಮ ಮುಂದೆ ನನ್ನ ಬಗ್ಗೆ ಗೀಚುತ್ತಿದ್ದೇನೆ. ಒಮ್ಮೆ ಟಿ ವಿ ವಾರ್ತಾವಾಚಕನಾಗಿ, ವರದಿಗಾರನಾಗಿ, ರೇಡಿಯೋದಲ್ಲಿ ಆರ್ ಜೆ ಆಗಿ, ಪ್ರೊಡ್ಯೂಸರ್ ಆಗಿ ಕೆಲಸ ಮಾಡಿ ಮಾಡಿದ್ದೇನು ಅಂತ ಕೇಳಿದ್ರೆ, ಹೇಳೋದಕ್ಕೆ ನನ್ನ ಈ ಬ್ಲಾಗ್ ಇದೆ. ಸಂಕ್ಷಿಪ್ತವಾಗಿ ಹೇಳೋದಾದ್ರೆ, ಈ ಬ್ಲಾಗ್ ಪ್ರಸ್ತುತ ನಡೀತಾ ಇರೋ ವಿಚಾರಗಳ ಬಗ್ಗೆ ನನ್ನ ಭಾವನೆಗಳ, ಮತ್ತವುಗಳ ಬಗ್ಗೆ ನನ್ನ reactionಗಳನ್ನು ಹಿಡಿದಿಡೋದಕ್ಕೆ ನನ್ನ ಪ್ರ ಯತ್ನ.

ಇದೀಗ  ಸುವರ್ಣ ವಾಹಿನಿಯ ಹಿನ್ನೆಲೆಯಲ್ಲಿ ಬರುವ ಧ್ವನಿ ನನ್ನದು. ಪ್ಯಾಟೇ ಹುಡ್ಗೀರ್ ಹಳ್ಳೀ ಲೈಫು, ಹಳ್ಳಿ ಹೈದ ಪ್ಯಾಟೇಗ್ ಬಂದ, ಪ್ಯಾಟೇ ಮಂದಿ ಕಾಡಿಗ್ ಬಂದ್ರು ಮುಂತಾದ  ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಬರುವ ಧ್ವನಿಯ ಮುಖ ಯಾವುದು ಅಂದರೆ, ಅದು ನನ್ನದು ಅನ್ನುವ ಅವಕಾಶ ನನಗಿಲ್ಲಿ ಸಿಕ್ಕಿದೆ. ನಿಮಗಿಷ್ಟವಾಗದ್ದೇನಿದೆ ಅದನ್ನೂ ಇಲ್ಲೇ ಹೇಳಿ ಬಿಡಿ. ಜೊತೆಗೆ ಸುವರ್ಣ ನ್ಯೂಸ್ 247 ನಲ್ಲಿ ಬರುವ ಚಿದಂಬರ ರಹಸ್ಯ ಕಾರ್ಯಕ್ರಮದಲ್ಲೂ ನಿರೂಪಕನಾಗಿ ಕಾಣಿಸಿಕೊಳ್ಳುತ್ತಿದ್ದೇನೆ.

ಇವುಗಳ ಜೊತೆ ಜೊತೆಗೆ ಡಾಕ್ಯುಮೆಂಟರಿಗಳು, ಕಾರ್ಪರೇಟ್ ವಿಡಿಯೋಗಳನ್ನು ತಯಾರಿಸುವಲ್ಲೂ ಪ್ರಯತ್ನಗಳನ್ನು ನಡೆಸಿದ್ದೇನೆ. ಮುಂದೇನೇನು ಮಾಡೋದಿದ್ದರೂ ನಿಮಗೆ ಗೊತ್ತಾಗದಂತೆ ಮಾಡೋದಕ್ಕೂ ಮನಸೊಪ್ಪುವುದಿಲ್ಲ ಅನ್ನುವುದೂ ಗೊತ್ತು.

ಹೊಸ ಹೊಸತುಗಳಿಗೆ ಇಲ್ಲಿ ಪದ ಪೋಣಿಸಿ ಜೋಡಿಸಿಡುವ ಕಾರ್ಯವನ್ನು ಆಗಾಗ ನಡೆಸುವ ಭರವಸೆಯೊಂದಿಗೆ.

ಬಡೆಕ್ಕಿಲ ಪ್ರದೀಪ

2 Responses

  1. i like to read more abt u.. plzz do update abt u praddep

  2. Good going.. all the best for future, keep the spirit and keep going, you rock man…

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.