ನಿನ್ನೆ ಪೂರ್ತಿ ನಿನ್ನ ಕಾಡಿದೆ
ನಿನ್ನೆಯವರೆಗೆ ನಿನ್ನ ಕಾಡಿದ ಹಾಗೆ
ನಿನ್ನೆ ರಾತ್ರಿ ನಿನ್ನನ್ನೇ ನೆನೆದೆ
ನಿನ್ನೆಯವರೆಗೆ ನಿನ್ನ ನೆನೆದ ಹಾಗೆ
ಪ್ರಾಯ ಚಿಕ್ಕದು
ಪ್ರೀತಿ ದೊಡ್ಡದು
ನೀನು ನೀಡಿದ ಮಮತೆ ಮರೆಯದು
ತಂಗೀ ಅಂದರೆ ನೀನು ಒಬ್ಬಳೆ
ನನ್ನ ಪೂರ್ತಿ ಜನುಮಕೊಬ್ಬಳೆ
ಹುಸಿ ಮುನಿಸಲಿ ಮೂಗು ಮುರಿಯುವೆ
ಮರುಕ್ಷಣದಲೇ ಬಂದು ತಬ್ಬುವೆ
ನನಗೆ ಗೊತ್ತಿದೆ ನೀನು ಹೀಗೆಯೇ
ದೂರ ಹೋದರೂ ನನ್ನ ತಂಗಿಯೇ
ಮರೆವೆನೆಂದರೆ ಮರೆವೆ ಹೇಗೆ
ನೀನು ನೀಡಿದ ಪ್ರೀತಿ ನನಗೆ