ನಾನು ಬೆಂಗಳೂರಿಗೆ ಬಂದು 5 ವರ್ಷವಾಗಿದೆ. ಅಂದ ಹಾಗೆ, ಬೆಂಗಳೂರಿಗೆ ಬರುವುದಕ್ಕೂ ನನ್ನ ವೃತ್ತಿಪರ ಬದುಕಿಗೂ ನೇರ ಸಂಬಂಧವಿದೆ. ಟಿವಿ9ನಲ್ಲಿ ವರದಿಗಾರನಾಗಿ ಸೇರುವುದಕ್ಕೇ ಬೆಂಗಳೂರಿಗೆ ಬಂದಿದ್ದೆ. ಮೇ 2, 2006. ನಿನ್ನೆಗೆ ಸರಿಯಾಗಿ ಐದು ವರ್ಷ ತುಂಬಿ ಇದೀಗ ನನ್ನ ವೃತ್ತಿ ಬದುಕಿನ ಪ್ರಥಮ ದಶಕದ ದ್ವಿತೀಯಾರ್ಧಕ್ಕೆ ಕಾಲಿಡುತ್ತಿದ್ದೇನೆ.
ಒಬ್ಬ ವರದಿಗಾರನಾಗಿ ಶುರುಮಾಡಿದ ನನ್ನ ವೃತ್ತಿ ಬದುಕು ನಂತರ ವಾರ್ತಾವಾಚನ, ಹಿನ್ನೆಲೆ ಧ್ವನಿ, ಒಂದೊಮ್ಮೆ ಛಾಯಾಗ್ರಹಣ, ಮುಂದೆ ವರ್ಲ್ಡ್ ಸ್ಪೇಸ್ ನಲ್ಲಿ ಆರ್ ಜೆಯಾಗಿ, ಬಿಗ್ ಎಫ್ ಎಂನಲ್ಲಿ ಸಹ ನಿರ್ಮಾಪಕನಾಗಿ ನಂತರ ಆಜ್ ತಕ್, ಹೆಡ್ ಲೈನ್ಸ್ ಟುಡೇಯಲ್ಲಿ ಬೆಂಗಳೂರಿನ ವರದಿಗಾರನಾಗಿ ಪ್ರತಿ ಬಾರಿಯೂ ಹೊಸ ತಿರುವು ಕಾಣುತ್ತಾ ಹೋಯಿತು, ಹೊಸ ರೂಪ ಪಡೆಯುತ್ತಾ ಹೋಯಿತು. ಬದಲಾವಣೆಯೊಂದೇ ಶಾಶ್ವತ ಅನ್ನುತ್ತಾರಲ್ಲ, ಹಾಗೆ, ನನ್ನ ವೃತ್ತಿ ಬದುಕಿನಲ್ಲಿ ಬದಲಾವಣೆಯೊಂದೇ ನಿತ್ಯನೂತನವಾಯಿತು. ಪ್ರತಿ ಬಾರಿಯೂ ಹೊಸತನ್ನು ಕಲಿಯುವ, ಹೊಸ ವ್ಯಕ್ತಿಗಳೊಂದಿಗೆ ದುಡಿಯುವ ಅವಕಾಶ ನನ್ನದಾಗುತ್ತಾ ಬಂದಿದೆ.
ಎರಡು ವರ್ಷ ಹಿಂದೆ ಸುವರ್ಣ ವಾಹಿನಿಯ ಪ್ರೋಮೋ ಮುಖ್ಯಸ್ಥ ಮತ್ತು ಹಿನ್ನೆಲೆ ಧ್ವನಿಯಾಗಿ ಸೇರಿದಾಗ ಇನ್ನೊಂದು ಬದಲಾವಣೆ. ಇದೀಗ ಅದೇ ಚಾನಲ್ ನ ಅಧಿಕೃತ ಹಿನ್ನೆಲೆ ಧ್ವನಿಯಾಗಿ ಫ್ರೀಲಾನ್ಸಿಂಗ್ ಮಾಡುತ್ತಿರುವುದು ಖುಷಿ ಕೊಡುತ್ತಿದೆ. ಚಾನಲ್ ಗೆ ಎಲ್ಲಾ ರೀತಿಯಲ್ಲೂ ಹೆಸರು ತಂದು ಕೊಡುತ್ತಿರುವ, ಪ್ಯಾಟೇ ಹುಡ್ಗೀರ್ ಹಳ್ಳೀ ಲೈಫು, ಹಳ್ಳೀ ಹೈದ ಪ್ಯಾಟೇಗ್ ಬಂದ, ಪ್ಯಾಟೇ ಮಂದಿ ಕಾಡೀಗ್ ಬಂದ್ರು, ಹೊಸ ಲವ್ ಸ್ಟೋರಿ, ಮತ್ತು ಇದೀಗ ಪ್ಯಾಟೇ ಹುಡ್ಗೀರ್ ಹಳ್ಳೀ ಲೈಫು ಸೀಜನ್-2, ಈ ಎಲ್ಲಾ ಶೋಗಳ ಅಧಿಕೃತ ಹಿನ್ನೆಲೆ ಧ್ವನಿಯಾಗಿ, ಶೋನ ಸಹ ಸಾರಥಿಯ ಪಾತ್ರದಲ್ಲಿ ನಡೆಯುತ್ತಿರುವ ಸಂತೋಷ ಅಷ್ಟಿಷ್ಟಲ್ಲ.
ನಿಮ್ಮಲ್ಲಿ ಹಲವು ಮಂದಿ ಈ ಶೋಗಳನ್ನು ನೋಡಿದ್ದರೂ ಆ ಧ್ವನಿ ನನ್ನದೆನ್ನುವುದು ಗೊತ್ತಿರಲಿಕ್ಕಿಲ್ಲವಾದ್ದರಿಂದ ಈ ಮೂಲಕ ಹೇಳಬೇಕಾಗಿ ಬಂದಿದೆ. ಅದೇನೇ ಇರಲಿ, ನಾನಲ್ಲದಿದ್ದರೂ ನನ್ನ ಧ್ವನಿ ಎಲ್ಲೆಡೆ ಚಿರಪರಿಚಿತವಾಗಿದೆ ಅನ್ನುವುದಕ್ಕೆ ಆಗಾಗ ಬರುವ ಕರೆಗಳು, ಎಸ್ಸೆಮೆಸ್ ಗಳು, ಪತ್ರಗಳು, ಅಥವಾ ನೇರವಾಗಿ ಸಿಕ್ಕು ಅಭಿನಂದಿಸುವ ವೀಕ್ಷಕರೇ ಸಾಕ್ಷಿ.
ಸುವರ್ಣದ ಅಡಿಬರಹ- ಹೊಸತನ ಪ್ರತಿಕ್ಷಣ ನನ್ನ ಲೇಖನಿಯಿಂದ ಬಂದ ಸಾಲು, ಪ್ಯಾಟೇ ಹುಡ್ಗೀರ್ ಹಳ್ಳೀ ಲೈಫು, ನಾನು ಕೊಟ್ಟಿದ್ದ ಸಿಟೀ ಹುಡ್ಗೀರ್ ಹಳ್ಳೀ ಲೈಫಿನ ಬಹುಪಾಲನ್ನು ಉಳಿಸಿಕೊಂಡಿದೆ. ಹೀಗೇ ಇನ್ನೂ ಹಲವು ಸಾಲುಗಳು, ಹೆಸರುಗಳು, ಆದರೆ ಇವೆರಡು ಮೈಲ್ ಸ್ಟೋನ್ ಗಳು.
ಅಂದಹಾಗೆ, ಈ ನನ್ನ ಪಯಣದಲ್ಲಿ ಎಷ್ಟೊಂದು ಏರುಪೇರುಗಳು, ಇದಕ್ಕೆಲ್ಲಾ ಬೆನ್ನೆಲುಬಾಗಿ ನಿಂತು ನನ್ನ ಪಯಣವನ್ನು ಸುಖಕರವಾಗಿ ಮಾಡಿದ ಅದೆಷ್ಟೋ ಮಂದಿ, ಕೆಲವರು ಹೊಸತಾಗಿ ಗೆಳೆಯರಾಗಿದ್ದಾರೆ, ಕೆಲವರು ಹೀಗೇ ಸಿಕ್ಕವರು ಜೊತೆಯಾಗಿದ್ದಾರೆ, ಕೆಲವು ಮಂದಿ ಬಾಲ್ಯದಿಂದ ಬಂಬಲವಾಗಿದ್ದಾರೆ. ಏನೇ ಆದರೂ ಎಲ್ಲರೂ ನನ್ನೀ ಪಯಣಕ್ಕೆ ಆಧಾರವಾಗಿದ್ದಾರೆ.
ಇದೀಗ ಕಳೆದ ಐದು ವರ್ಷಗಳೂ ಮಾಡಿರದ ಹೊಸತೊಂದು ಕೆಲಸ ಮಾಡುವ ಅವಕಾಶ ನನ್ನದಾಗಿದೆ. ನಿನ್ನೆಯಿಂದ ಸುವರ್ಣ ವಾಹಿನಿಯಲ್ಲಿ ಆರಂಭವಾಗಿರುವ ಹೊಸ ಧಾರವಾಹಿ ಕೃಷ್ಣ ರುಕ್ಮಿಣಿಯಲ್ಲಿ ಆಕ್ಟಿಂಗ್ ಮಾಡುವ ಮೂಲಕ ನಟನಾ ವೃತ್ತಿಯಲ್ಲಿ ಹೊಸ ಹೆಜ್ಜೆ ಇಟ್ಟಿದ್ದೇನೆ. ಧಾರಾವಾಹಿ ವೀಕ್ಷಿಸಿ, ಪ್ಯಾಟೇ ಹುಡ್ಗೀರ್ ಹಳ್ಳೀ ಲೈಫು ನೋಡಿ.
tumba chennagide ri nimma baraha. Nimma hosa acting career ge all the very best. nimma baravanige oodtha idre.. namma jeevnada hale hejjegalu nenpaagthave
Badalavane onde shashvatha, adu nirantara!
im impressed adt ur life. Kasta pattorige holle avakasha sikke siguthe pradeep.